+971 50 7554105
ತುಮ್ಚ್ಯಾ ಗಮನಾಕ್:

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಚ್ಯೊ ವರ್ಸಾವರ್ ಪ್ರಶಸ್ತಿ ಪ್ರಗಟ್

05-03-2016 ಶನಿವಾರ  ಸಂಜೆ 5.00 ಗಂಟೆಗೆ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಾಂಬಾರು ಮಂಡಳಿ ಮತ್ತು ತಂಝಿಂ  ಭಟ್ಕಳ, ಇದರ ಅಧ್ಯಕ್ಷರಾದ ಶ್ರೀ ಮುಝಾಂಬಿಲ್ ಕಾಝಿಯಾ, ಭಟ್ಕಳ ಪುರಸಭಾ ಅಧ್ಯಕ್ಷರಾದ ಶ್ರೀ ಮಂಜಮ್ಮ ರವೀಂದ್ರ, ತಾಲೂಕು ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಶ್ರೀಮತಿ ಶಾಂತಿ ಜಗದೀಶ್ ಸುಕ್ರನ್ ಮನೆ,  ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಅಬ್ದುಲ್ ರಹೀಮ್, ಸೇವಾವಾಹಿನಿ ಇದರ ಅಧ್ಯಕ್ಷರಾದ ಶ್ರೀ ಸುರೇಂದ್ರ ಶ್ಯಾನುಭಾಗ್, ಇಸ್ಲಾಮಿಕ್ ವೆಲ್ಫೇರ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಖಾದಿರ್ ಮೀರಾ ಪಠೇಲ್, ಭಟ್ಕಳದ ಉದ್ಯಮಿ ಶ್ರೀ ರಾಜೇಶ್ ನಾಯಕ್, ಸಾಮಾಜಿಕ ಮುಂದಾಳು ಮತ್ತು ವಕೀಲಾಗಿರುವ ಶ್ರೀ ವಿಕ್ಟರ್ ಗೋಮ್ಸ್,  ಕಥೋಲಿಕ ಸಭಾದ ಅಧ್ಯಕ್ಷರಾದ ಶ್ರೀ ಜೊನ್ ಫ್ರಾನ್ಸಿಸ್ ಗೋಮ್ಸ್, ಅಖಿಲ ಭಾರತ ಕೊಂಕಣಿ ಖಾರ್ವಿ ಮಹಜನ ಸಭಾದ ಉಪಾಧ್ಯಕ್ಷರಾದ ತಿಮ್ಮಪ್ಪ ಖಾರ್ವಿ, ಅರ್ಬನ್ ಕೋ ಅಪರೇಟಿವ್ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಮತ್ತು ನಾಕುದಾಲ್ದಿ ಸಮುದಾಯದ ಮುಂದಾಳು ಶ್ರೀ ಅಬ್ದುಲ್ ರಜಾಕ್ ಸಾರಂಗ್, ಜಿ.ಎಸ್.ಬಿ. ಸಮಾಜದ ಅಧ್ಯಕ್ಷರಾದ ಶ್ರೀ ಹರಿಶ್ಚಂದ್ರ ಕಾಮತ್, ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಧರ್ಮದರ್ಶಿ  ಶ್ರೀ ರಾಮದಾಸ ಪ್ರಭು ಇವರುಗಳು ಅತಿಥಿಗಳಾಗಿ ಭಾಗವಹಿಸಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊ ಇವರು ವಹಿಸಿಕೊಳ್ಳಲಿದ್ದಾರೆ.



ಕೊಂಕಣಿ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಕೊಂಕಣಿಯ ವೈವಿಧ್ಯಮಯ ಜಾನಪದ ನೃತ್ಯ, ಸಂಗೀತ ರಸಸಂಜೆ  ಮತ್ತು ನಾಟಕ ಮತ್ತು ಗಝಲ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೊಂಕಣಿ ಖಾರ್ವಿ ಕಲಾ ಮಾಂಡ್ ಭಟ್ಕಳ ಇವರಿಂದ ಖಾರ್ವಿ ಜಾನಪದ ನೃತ್ಯ, ಮೇಸ್ತ ಕಲಾ ತಂಡ ಶಿರೂರು ಇವರಿಂದ ಮೇಸ್ತ ಜಾನಪದ ನೃತ್ಯ, ಕರಾವಳಿ ಬಳಗ ಹೊನ್ನಾವರ ಇವರಿಂದ ನೃತ್ಯ ಮತ್ತು ಹಾಡುಗಳು, ಝೇಂಕಾರ ಮೆಲೋಡಿಸ್ ಭಟ್ಕಳ ಇವರಿಂದ ಕೊಂಕಣಿ ಸಂಗೀತ ರಸಮಂಜರಿ, ಲೂರ್ಡ್ಸ್ ಚರ್ಚ್ ಮಂಡಳಿ, ಮುಂಡಳ್ಳಿ ಇವರಿಂದ ಕೊಂಕಣಿ ಸಾಂಸ್ಕೃತಿಕ ಕಾರ್ಯಕ್ರಮ, ನವಾಯತಿ ಮೆಹಫಿಲ್, ಭಟ್ಕಳ ಇವರಿಂದ ಗಝಲ್ ಮತ್ತು ನಾಟಕ ಕಾರ್ಯಕ್ರಮ, ನಯನ ನೃತ್ಯ ನಿಕೇತನ ಭಟ್ಕಳ ಇವರಿಂದ ಭರತನಾಟ್ಯ ಕಾರ್ಯಕ್ರಮ ಪ್ರದರ್ಶನವಿರುತ್ತದೆ. ಈ ದಿನದ ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀ ಪ್ರಸನ್ನ ಪ್ರಭು ಹಾಗೂ ಡಾ.ಅರವಿಂದ ಶಾನುಬಾಗ್ ಇವರು ನಡೆಸಿ ಕೊಡಲಿದ್ದಾರೆ.

ದಿನಾಂಕ 06-03-2016 ಬೆಳಿಗ್ಗೆ 10.30 ಗಂಟೆಗೆ ನಾಗಯಕ್ಷೆ ಸಭಾಭವನದಲ್ಲಿ  ಪ್ರಶಸ್ತಿ ವಿಜೇತರೊಂದಿಗೆ ಸಂವಾದ ಕಾರ್ಯಕ್ರಮ:

ಅಕಾಡೆಮಿಯ 2015 ನೇ ಸಾಲಿನ ಗೌರವ ಪ್ರಶಸ್ತಿ ವಿಜೇತರು, ಪುಸ್ತಕ ಬಹುಮಾನ ಪಡೆದ ಲೇಖಕರು, ಹಾಗೂ ಯುವ ಪುರಸ್ಕಾರ ಪಡೆದ ಮಹನೀಯರುಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.  ಈ ಕಾರ್ಯಕ್ರಮಕ್ಕೆ ಡಾ. ಆರ್ ವಿ. ಸರಾಪ್, ಶ್ರೀ ಜುಬೆರ್ ಜುಕಾಕ್, ಶ್ರೀ ಸಾದಿಕ್ ಅಸರಮತ್ತ್,  ಶ್ರೀ ಪದ್ಮನಾಭ ಪೈ, ಶ್ರೀ ಯಾಕೂಬ್ ಅಹ್ಮದ್, ಶ್ರೀ ಅತಿಕುರ್ರೆಹಮಾನ್ ಎಸ್., ಇವರುಗಳು ಸಹಕಾರ ನೀಡಲಿರುವರು.

06-03-2016 -ಸಂಜೆ 4.00 ಗಂಟೆಗೆ  ವೈಭವದ ಸಾಂಸ್ಕೃತಿಕ  ಮೆರವಣಿಗೆ :

ಪ್ರಶಸ್ತಿ ವಿಜೇತರೊಂದಿಗೆ ವೈಭವದ ಸಾಂಸ್ಕೃತಿಕ  ಮೆರವಣಿಗೆಯು ಅಂಜುಮಾನ್ ಗ್ರೌಂಡ್ ನಿಂದ ಹೊರಟು  ಮಾರಿಕಟ್ಟಾ ವೃತ್ತ, ಫೂಲ್ ಬಜಾರ್, ನೆಹರೂ ರಸ್ತೆ, ನಾಗರಕಟ್ಟೆಯಿಂದ ನಾಗಯಕ್ಷೆ ಸಭಾಭವನವನ್ನು ತಲುಪಲಿದೆ. ಈ ಮೆರವಣಿಗೆಯಲ್ಲಿ ಕೊಂಕಣಿಯ ವಿವಿಧ ಕಲಾತಂಡಗಳು ಭಾಗವಹಿಸಲಿವೆ. ಜೇಮ್ಸ್ ಲೋಪಿಸ್ ಮತ್ತು ತಂಡದವರ ಮದರ ತೆರೆಜಾ ಬ್ರಾಸ್ ಬ್ಯಾಂಡ್, ನಾಕುದಾ ಧಪ್ ಮಂಡಳಿಯ ದಫ್, ಲಕ್ಷ್ಮಿ ಸಿದ್ದಿ ಮತ್ತು ತಂಡದವರ ಸಿದ್ದಿ ದಮಾಮ್, ಪುಗ್ಡಿ ನೃತ್ಯ,  ವಾಮನ್ ಶಿರ್ಸಾಟ್ ಇವರಿಂದ ನೃತ್ಯ, ಕುಮ್ರಿ ಮರಾಠಿ ಇವರ ಯಕ್ಷಗಾನ ಪ್ರದರ್ಶಿಕೆ, ಹರೀಶ್ ಪಾಲೇಕರ್ ಮತ್ತು ತಂಡದ ಬೇಡರ ನೃತ್ಯ, ಶ್ರೀ ಲಕ್ಷ್ಮಿ ವೆಂಕಟರಮಣ ಮಹಿಳಾ ಚೆಂಡೆ ವೃಂದ ಇವರ ಚಂಡೆ, ನಂದ ಕಲಗುಟಕರ ಇವರಿಂದ ಖೇಳ್ ಪ್ರಸಂಗ, ವಿಷ್ಣುರಾಣಿ ಮತ್ತು ತಂಡದವರ ಧೋಲ್ ನೃತ್ಯ, ಸತೀಶ್ ಬೇಳಾರ್‌ಕರ್ ಮತ್ತು ತಂಡದಿಂದ ಶಿಗ್ಮೊ ನೃತ್ಯ,  ದೈವಜ್ಞ ಮಹಿಳಾ ಸಂಘ ಇವರ ಅಷ್ಟ ಲಕ್ಷ್ಮಿ ರೂಪಕ,  ಶಿವಾನಿ ಸುರೇಂದ್ರ ಬಾಂದೇಕರ್ ಮತ್ತು ತಂಡದ ತೊಣಿಯಾ ನೃತ್ಯ ಈ ಎಲ್ಲಾ ಪ್ರದರ್ಶನಗಳಿರುತ್ತದೆ. ಮೆರವಣಿಗೆ ಕಾರ್ಯಕ್ರಮದ ನಂತರ ವೇದಿಕೆಯಲ್ಲಿ  ವಿವಿಧ ಕಲಾಪಂಗಡದವರ ವೈವಿಧಮಯ ಜಾನಪದ ಪ್ರದರ್ಶನವನ್ನು ಏರ್ಪಡಿಸಲಾಗಿದೆ. 
ಈ ಕಾರ್ಯಕ್ರಮದ ಕಾರ್ಯನಿರ್ವಹಣೆಯನ್ನು ಶ್ರೀ ರಾಮನಾಥ ಮೇಸ್ತ ಹಾಗೂ ಶ್ರೀ ಕಮಲಾಕ್ಷ ಶೇಟ್ ನಡೆಸಿಕೊಡಲಿದ್ದಾರೆ.

06-03-2016  ಸಂಜೆ 5.00 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ:

ಪ್ರಶಸ್ತಿ ವಿಜೇತರಿಗೆ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳಾದ ಮಾನ್ಯ ಶ್ರೀ ಸಿದ್ದರಾಮಯ್ಯ ರವರು ಗೌರವ ಪ್ರದಾನ ಮಾಡಲಿರುವರು. ಅಕಾಡೆಮಿ ಗೌರವ ಪ್ರಶಸ್ತಿಯನ್ನು ಕೊಂಕಣಿ ಸಾಹಿತ್ಯ ವಿಭಾಗದ ಪ್ರಶಸ್ತಿಗಾಗಿ ಶ್ರೀ ರಾಮಚಂದ್ರ ಎಂ. ಶೇಟ್, ಕಲಾ ವಿಭಾಗದ ಪ್ರಶಸ್ತಿಗಾಗಿ ಶ್ರೀ ಕಾಸರಗೋಡು ಚಿನ್ನಾ, ಜಾನಪದ ಕ್ಷೇತ್ರದ ಪ್ರಶಸ್ತಿಗಾಗಿ ಶ್ರೀ ಆಲೂ ಪೀಲೂ ಮರಾಠಿ, ಇವರನ್ನು ಗೌರವಿಸಲಾಗುವುದು. ಪುಸ್ತಕ ಬಹುಮಾನಕ್ಕಾಗಿ  ಕೊಂಕಣಿಗೆ ಭಾಷಾಂತರಕ್ಕಾಗಿ ಓಂ ಗಣೇಶ್ (ಪುಸ್ತಕ - ಭಾಯ್ಲ ಭಾಡೆ ಬಾಯ್ಲ್), ಕೊಂಕಣಿ ಲೇಖನಕ್ಕಾಗಿ ಫಾ. ಡೆನಿಸ್ ಕ್ಯಾಸ್ತೆಲಿನೊ (ಪುಸ್ತಕ-ದಲಿತ್), ಕೊಂಕಣಿ ಅಧಯನ ಕೃತಿಗಾಗಿ ಶ್ರೀ ರೊನಿ ಅರುಣ್ (ಪುಸ್ತಕ-ಥಕಾನಾತ್‌ಲ್ಲೊ ಝುಜಾರಿ), ಯುವ ಪುರಸ್ಕಾರಕ್ಕಾಗಿ  ಕು. ಅಂಜಲಿ ವಿಲ್ಸನ್ ವಾಜ್,  ಶ್ರೀ ನಸರುಲ್ಲ ಅಸ್ಕೇರಿ, ಶ್ರೀ ರಾಜಾರಾಮ ಪ್ರಭು ಇವರುಗಳನ್ನು ಆರಿಸಲಾಗಿದೆ.  ಹಾಗೂ ಕೊಂಕಣಿಗರಾಗಿದ್ದು, ಸಾರ್ವಜನಿಕ ಕ್ಷೇತ್ರದಲ್ಲಿ ಸಾಧನೆಗೈದ  ಮೂವರು ಸಾಧಕರು ಶ್ರೀ ಸಿಎ ಎಸ್. ಎಮ್ ಸಯ್ಯದ್ ಖಲೀಲ್, ಶ್ರೀ ಪ್ರದೀಪ್ ಜಿ. ಪೈ  ಮತು ಶ್ರೀ ಜೊರ್ಜ್ ಫರ್ನಾಂಡಿಸ್, ಇವರನ್ನು ಗೌರವಿಸಲಾಗುವುದು.
 
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಶ್ರೀಮತಿ ಉಮಾಶ್ರೀ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಕೈಗಾರಿಕ ಮತ್ತು ಪ್ರವಾಸೋದ್ಯಮ ಖಾತೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಅರ್.ವಿ.ದೇಶಪಾಂಡೆ ಇವರು ಗೌರವ ಉಪಸ್ಥಿತಿ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಸದೀಯ ಕಾರ್ಯದರ್ಶಿ  ಮಾನ್ಯ ಶ್ರೀಮತಿ ಶಕುಂತಲಾ ಟಿ ಶೆಟ್ಟಿ ಹಾಗೂ  ಉತ್ತರ ಕನ್ನಡದ ಸಂಸದರಾದ ಮಾನ್ಯ ಶ್ರೀ ಅನಂತ ಕುಮಾರ್ ಹೆಗಡೆ ಇವರು ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ, ಭಟ್ಕಳ ವಿಧಾನ ಸಭಾ ಸದಸ್ಯರಾದ ಶ್ರೀ ಮಾಂಕಾಳ ವೈದ್ಯ ಇವರು ಈ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಲಿರುವರು, ಅಕಾಡೆಮಿಯ ಅಧ್ಯಕ್ಷರಾದ ಶ್ರೀ ರೊಯ್ ಕ್ಯಾಸ್ತೆಲಿನೊ ಇವರು ಪ್ರಾಸ್ತಾವಿಕ ಮಾತುಗಳನ್ನಾಡುವರು.  ಈ ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ಮಮತಾ ಕಾಮತ್ ಮತ್ತು ಶ್ರೀ ಅಶೋಕ್ ಕಾಸರಕೋಡು ಇವರು ನಡೆಸಿ ಕೊಡಲಿರುವರು.
ಕಾರ್ಯಕ್ರಮದಲ್ಲಿ ಅಕಾಡೆಮಿಯ 2015ನೇ ಸಾಲಿನ ಗೌರವ ಪ್ರಶಸ್ತಿ ಕಾರ್ಯಕ್ರಮದ ಸಂಘಟನಾ ಸಮಿತಿ ಸದಸ್ಯರು, ಹಾಗೂ ಅಕಾಡೆಮಿಯ ಸರ್ವ ಸದಸ್ಯರುಗಳು ಭಾಗವಹಿಸಲಿದ್ದಾರೆ.

2015 ರ ಕೊಂಕಣಿ ಅಕಾಡೆಮಿ ಗೌರವ ಪ್ರಶಸ್ತಿ ವಿಜೇತರ ಕಿರು ಮಾಹಿತಿ:

ಕೊಂಕಣಿ ಸಾಹಿತ್ಯ : ಶ್ರೀ ರಾಮಚಂದ್ರ ಮಹಾಬಲೇಶ್ವರ ಶೇಟ್, ಶಿರಸಿ.

ಶಿರಸಿ ನಿವಾಸಿಯಾದ ಶ್ರೀಯುತರು  ಹೈಸ್ಕೂಲ್ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ನಿವೃತ್ತರಾಗಿದ್ದಾರೆ. ಇವರು ಕೊಂಕಣಿ ಮತ್ತು ಕನ್ನಡ ದ್ವಿಭಾಷಾ ಸಾಹಿತಿಯಾಗಿದ್ದು, ಕವನ, ಸಣ್ಣಕಥೆ, ಕಾದಂಬರಿ,  ಪ್ರಕಾರಗಳಲ್ಲಿ ಹಲವಾರು  ಸಾಹಿತ್ಯ ಕೃತಿಗಳನ್ನು ’ಆರ್ಯಂ’ ಯೆಂಬ  ಕಾವ್ಯನಾಮದೊಂದಿಗೆ ಪ್ರಕಟಿಸಿ ಪ್ರಸಿದ್ದರಾಗಿದ್ದಾರೆ. ರಾಗಿಣಿ, ವಕ್ದಾಜಾಡಾ, ಸುಧಾರ್ಯ, ನಾದ, ಕಾಮಾಪೂರ್ತಿ ಮಾಮಾ ಕೊಂಕಣಿ ಪುಸ್ತಕಗಳನ್ನು ಬರೆದು ಪ್ರಕಟಿಸಿರುತ್ತಾರೆ. ಕಲಾಕ್ಷೇತ್ರದಲ್ಲಿಯೂ ಇವರು ಸೇವೆ ಸಲ್ಲಿಸಿರುತ್ತಾರೆ. ಯಕ್ಷಗಾನ, ನಾಟಕಗಳಲ್ಲಿ ನಟನೆ, ದಿಗ್ದರ್ಶನ, ನಾಟಕ ರಚನೆ ಇವರ ಇತರ ಹವ್ಯಾಸಗಳು. ಇವರ ಅನೇಕ ಲೇಖನಗಳು ಮತ್ತು ಧಾರಾವಾಹಿಗಳು ’ಪಂಚ್ಕಾದಾಯಿ’ ಮಾಸಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕೊಂಕಣಿ ಕಲೆ : ಶ್ರೀ ಶ್ರೀನಿವಾಸ್ ರಾವ್ ಎಸ್. (ಕಾಸರಗೋಡು ಚಿನ್ನಾ) - ಕಾಸರಗೋಡು

ಕಾಸರಗೋಡಿನ ನಿವಾಸಿಯಾಗಿರುವ ಇವರು ನಾಟಕ ಕ್ಷೇತ್ರದಲ್ಲಿ ಹೆಸರು ಗಳಿಸಿರುತ್ತಾರೆ. ಇವರು ಕನ್ನಡ ಕೊಂಕಣಿ, ತುಳು, ಮಲಯಾಳಂ, ಅಂಗ್ಲಭಾಷೆ ಹೀಗೆ ಒಟ್ಟಾರೆ 400ಕ್ಕಿಂತಲೂ ಹೆಚ್ಚಿನ ನಾಟಕಗಳಲ್ಲಿ ನಟಿಸಿರುತ್ತಾರೆ. ದೊನಿ ಘಡಿ ಹಾಸುನು ಕಾಡಿ, ಜಾಕ್ ಪಾಟ್ ಜನ್ನಾ, ಇತ್ಯಾದಿ ಹಲವು ಕೊಂಕಣಿ ನಾಟಕಗಳಲ್ಲಿ ನಟಿಸಿ, ಪ್ರಖ್ಯಾತರಾಗಿರುತ್ತಾರೆ. ಗಾಂಟಿ, ಆಯ್ಲೊರೆ ಆಯ್ಲೊ, ಯೆಕ್ಲೊ ಅನೇಕ್ಲೊ ಇವರು ಅನುವಾದಿಸಿದ ನಾಟಕ ಕೃತಿಗಳಾಗಿರುತ್ತದೆ. ಹಲವು ಕನ್ನಡ, ತುಳು, ಹಿಂದಿ ಕೊಂಕಣಿ ಚಲನಚಿತ್ರಗಳಲ್ಲಿ ಅಭಿನಯಿಸಿರುತ್ತಾರೆ.  ಇವರ ರಂಗಭೂಮಿಯಲ್ಲಿನ ನಟನೆಗಾಗಿ ಮತ್ತು ನಿರ್ದೇಶನಕ್ಕಾಗಿ ಉತ್ತಮ ನಟ ಮತ್ತು ನಿರ್ದೇಶಕರೆಂಬ ಗೌರವ ಲಭಿಸಿರುತ್ತದೆ.  ’ಉಜ್ವಾಡು’ ಎಂಬ ಕೊಂಕಣಿ ಚಲನಚಿತ್ರವನ್ನು ನಿರ್ದೆಶಿಸಿರುತ್ತಾರೆ. ಇವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿರುತ್ತಾರೆ. 

ಕೊಂಕಣಿ ಜಾನಪದ : ಶ್ರೀ ಆಲೂ ಪಿಲೂ ಮರಾಠಿ -ತೊಳಸಾಣಿ

ಇವರು ಹೊನ್ನಾವರದ ನಿವಾಸಿ. ಹಿಂದಿನ ಕಾಲದಲ್ಲಿ ಶಿವಾಜಿಯ ಸೈನ್ಯದೊಂದಿಗೆ ಸಾಮಾಗ್ರಿ ಸಾಗಣಿಕೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದು ಕಾಲಕ್ರಮೇಣ ಉತ್ತರ ಕನ್ನಡ ಜಿಲ್ಲೆಗೆ ವಲಸೆ ಬಂದು ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ತೀರ ಹಿಂದುಳಿದ ಜನಾಂಗವಾದ ಕೊಂಕಣ ಮರಾಠ ಸಮುದಾಯದವರು. ಕಾಡಿನ ಕೃಷಿ ಜೇನುತುಪ್ಪ ಸಂಗ್ರಹಣೆ ಮತ್ತು ಬೆತ್ತದ ಕರಕುಶಲ ವಸ್ತುಗಳನ್ನು ತಯಾರಿಸುವುದರಲ್ಲಿ ಎತ್ತಿದ ಕೈ. ವಯೋವೃದ್ದರಾದ ಇವರು ಯಕ್ಷಗಾನ ಕಲಾವಿದರೂ ಸುಗ್ಗಿ ಕುಣಿತ ಕಲಾವಿದರಾಗಿದ್ದೂ ಮುಂದಿನ ಪೀಳಿಗೆಗೂ ಈ ಕಲೆಯ ಬಗ್ಗೆ ತರಬೇತಿ ನೀಡುತ್ತಾ ಬಂದಿರುತ್ತಾರೆ. ಹಲವು ವರ್ಷಗಳಿಂದ ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಅನೇಕ ಸ್ಥಳಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ಕೊಂಕಣಿ ಪುಸ್ತಕ ಬಹುಮಾನಕ್ಕೆ ಆಯ್ಕೆಯಾದ ಪುಸ್ತಕ ಮತ್ತು ಲೇಖಕರ ಮಾಹಿತಿ :

ಕೊಂಕಣಿ ಲೇಖನ ಸಂಗ್ರಹ  - ದಲಿತ್ ;   ಲೇಖಕರು : ಫಾ| ಡೆನಿಸ್ ಕಾಸ್ತೆಲಿನೊ, ಮಂಗಳೂರು

ಪುಸ್ತಕದ ಬಗ್ಗೆ :
ದಲಿತ ಸಮುದಾಯಕ್ಕೆ ಸೇರಿದ ಜನರನ್ನು ಮುಖ್ಯವಾಹಿನಿಗೆ ತರುವಂತಹ ಕಾರ್ಯಗಳಲ್ಲಿ ನಿರತರಾದ ಲೇಖಕರು ಈ ಜನರೊಂದಿಗೆ ಬೆರತು ಅವರ ಕಷ್ಟ, ನೋವುಗಳಿಗೆ ಸ್ಪಂದಿಸಿ, ಅವರ ಜೀವನದ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ,  ಸಿದ್ದಪಡಿಸಿರುವ ಲೇಖನಗಳ ಸಂಗ್ರಹವೇ ಈ ದಲಿತ್ ಪುಸ್ತಕ. 
ಲೇಖಕರ ಬಗ್ಗೆ ಪರಿಚಯ: ಫಾ| ಡೆನಿಸ್ ಕಾಸ್ತೆಲಿನೊ ಇವರು ಓರ್ವ ಕ್ರೈಸ್ತ ಧರ್ಮಗುರುಗಳಾಗಿ ವಿವಿಧ ಚರ್ಚುಗಳಲ್ಲಿ ಕೆಲಸ ಮಾಡುವುದರೊಂದಿಗೆ, ಆಯಾ ಪ್ರದೇಶದ  ದಲಿತ ಸಮುದಾಯದೊಂದಿಗೆ ಬೆರೆತು ಅವರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ  ಕೆಲಸ ಮಾಡುತ್ತಾ ಆವರ  ಬಗ್ಗೆ ಅಧ್ಯಯನ ನಡೆಸಿರುತ್ತಾರೆ. ಪಾಳಾಂ ಆನಿ ಮುಳಾಂ  ಹಾಗೂ ಮೆಟಾಂ ಇವರ ಇತರ ಪ್ರಕಟಿತ ಕೃತಿಗಳು. ಹವಾರು ಲೇಖನಗಳು ಕೊಂಕಣಿ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ.

ಕೊಂಕಣಿಗೆ ಭಾಷಾಂತರ ನಾಟಕ -  ಬಾಯ್ಲ-ಭ್ಹಾಡೆಬಾಯ್ಲ;  ಲೇಖಕರು : ಓಂ ಗಣೇಶ್, ಉಪ್ಪುಂದ.

ಪುಸ್ತಕದ ಬಗ್ಗೆ :
  ಬಾಯ್ಲ-ಭ್ಹಾಡೆಬಾಯ್ಲ ಕನ್ನಡದ ಹೆಸರಾಂತ ಲೇಖಕರಾದ ಶ್ರೀ ರಾಜೇಂದ್ರ ಕಾರಂತರ ಸುಪ್ರಸಿದ್ದ ನಾಟಕ  ಮುದ್ದಣ್ಣನ ಪ್ರಮೋಶನ್ ಪ್ರಸಂಗ ನಾಟಕವನ್ನು   ಕೊಂಕಣಿ ಭಾಷೆಗೆ  ಭಾಷಾಂತರಿಸಿದ ಕೃತಿಯಾಗಿದೆ.
ಲೇಖಕರ ಬಗ್ಗೆ:  ಜಾದೂಗಾರಿಕೆಯ ವಿದ್ಯೆಯಲ್ಲಿ ಹೆಸರುಗಳಿಸಿರುವ ಇವರು ದೇಶ ವಿದೇಶಗಳನ್ನು ಸುತ್ತಿ ಅದರ ಅನುಭವವನ್ನು ಪುಸ್ತಕ ರೂಪದಲ್ಲಿ ಬರೆದು ಪ್ರಕಟಿಸಿರುತ್ತಾರೆ. ಇವರು  ಕನ್ನಡ ಮತ್ತು ಕೊಂಕಣಿಯಲ್ಲಿ ಪ್ರವಾಸ ಸಾಹಿತ್ಯ ಕೃತಿಗಳು ಪ್ರಕಟವಾಗಿರುತ್ತದೆ.  ಇತರ ಭಾಷೆಯಿಂದ ಉತ್ತಮ ಕೃತಿಯನ್ನು ಆಯ್ಕೆ ಮಾಡಿ ಭಾಷಾಂತರಿಸುವ ಪ್ರಯತ್ನದಲ್ಲಿ ಇವರ ಈ ಕೃತಿಯು ಮೂಡಿ ಬಂದಿದೆ.

ಕೊಂಕಣಿ ಜೀವನ ಚರಿತ್ರೆಯ ಅಧ್ಯಯನ ಕೃತಿ : ಥಕಾನಾತ್‌ಲ್ಲೊ ಝುಜಾರಿ - ಲೇಖಕರು : ರೊನಿ ಅರುಣ್

ಪುಸ್ತಕದ ಬಗ್ಗೆ :
ಕೊಂಕಣಿ ಭಾಷೆ, ಸಾಹಿತ್ಯ, ಸಂಗೀತ ಕಲೆ, ಸಂಸ್ಕೃತಿ,  ಜಾನಪದ ಕ್ಷೇತ್ರಗಳ ಬೆಳವಣಿಗಾಗಿ ಅವಿರತವಾಗಿ ದುಡಿಯುತ್ತಿರುವ ಕೊಂಕಣಿಯ ಮಾಂಡ್ ಸೊಭಾಣ್ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಶ್ರೀ ಎರಿಕ್ ಒಝೇರಿಯೊ  ಇವರ ಜೀವನ ಕಥೆಯ ಅಧ್ಯಯನ ಕೃತಿಯೇ ಥಕಾನಾತ್‌ಲ್ಲೊ ಝುಜಾರಿ.
ಲೇಖಕರ ಬಗ್ಗೆ: ಅರುಣಾ ಶಿರೊನಾಮೆಯಲ್ಲಿ ಸುಮಾರು 20 ವರ್ಷದಿಂದ ಕೊಂಕಣಿಯಲ್ಲಿ ಬರೆಯುತ್ತಿರುವ ಇವರು ’ಬಿಡಾರ್’ ಎಂಬ ಸಣ್ಣಕಥೆಗಳ ಸಂಗ್ರಹ ಕೃತಿಯನ್ನು ಪ್ರಕಟಿಸಿರುತ್ತಾರೆ. ಸಂಗೀತಗಾರರು ಅಗಿರುವ ಇವರು ಹಲವು ಕೊಂಕಣಿ ಧ್ವನಿಸುರುಳಿಗಳಿಗಾಗಿ ಹಾಡಿದ್ದಾರೆ. ’ತೆಲೊಕಾ’ ಸಾಮಾಜಿಕ ಸಂಸ್ಥೆಂಇಇ ಪ್ರೇರಕರಲ್ಲಿ ಒಬ್ಬರಾಗಿದ್ದಾರೆ.

ಯುವ ಪುರಸ್ಕಾರ:

ಶ್ರೀ ರಾಜಾರಾಮ ಸುರೇಶ್ ಪ್ರಭು  ಭಟ್ಕಳ

ಕಲೆ ಸಂಗೀತ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಹವ್ಯಾಸಿ ಕಲಾವಿದರು. ಡಾ. ರಾಜಕುಮಾರ ಇವರ ಧನಿಯಲ್ಲಿ ಹಾಡುವುದು, ಸ್ತ್ರೀ ಮತ್ತು ಮಕ್ಕಳ ಧ್ವನಿಯಲ್ಲಿ ಹಾಡುವುದು, ನಟರ ಧ್ವನಿಯಲ್ಲಿ ಮಿಮಿಕ್ರಿ, ನಾಟಕಗಳಲ್ಲಿ ನಟನೆ, ರಿದಂ ಪ್ಯಾಡ್ ವಾದನ, ಚಲನಚಿತ್ರಗಳಲ್ಲಿ ನಟನೆ ಹಾಗೂ ಚಿತ್ರಕಲೆ ಮತ್ತು ಲಲಿತಕಲಾ ಕ್ಷೇತ್ರವೂ ಸೇರಿ ಬಹುಮುಖ ಪ್ರತಿಭೆಯನ್ನು ಹೊಂದಿರುತ್ತಾರೆ. ಟಿ.ವಿ. ಮಾಧ್ಯಮದಲ್ಲೂ ಹಾಗೂ ಅಕಾಶವಾಣಿಯಲ್ಲೂ ಇವರ ಕಾರ್ಯಕ್ರಮಗಳು ಪ್ರಸಾರವಾಗಿರುತ್ತದೆ. ಕಲೆಯನ್ನು ಬೆಳೆಸುವ ಉದ್ದೇಶದಿಂದ ’ಝೇಂಕಾರ ಕಲಾ ಸಂಘ’ವನ್ನು ಸ್ಥಾಪಿಸಿ ಅನೇಕ ಬಡ ವಿಧ್ಯಾರ್ಥಿಗಳಿಗೆ ಉಚಿತವಾಗಿ ಸಂಗೀತ ನೃತ್ಯ, ಚಿತ್ರಕಲೆ ಮುಂತಾದ ತರಬೇತಿಗಳನ್ನು ನೀಡುತ್ತಿದ್ದಾರೆ.

ಶ್ರೀ ನಸರುಲ್ಲಾ ಅಸೆರಿ - ಭಟ್ಕಳ 

ಕ್ರೀಡಾ ಕ್ಷೇತ್ರದಲ್ಲಿ ಅಸಕ್ತಿ ಹೊಂದಿರುವ ಇವರು ಕ್ರಿಕೆಟ್ ಆಟದಲ್ಲಿ ಹೆಸರು ಗಳಿಸಿರುತ್ತಾರೆ. ಕ್ರಿಕೆಟ್ ತಂಡದ ವೈಸ್ ಕ್ಯಾಪ್ಟೆನ್ ಆಗಿರುತ್ತಾರೆ. 2004-05 ರಲ್ಲಿ ಈ ಕ್ಷೇತ್ರದಲ್ಲಿ ಕಾಲಿರಿಸಿದ ಇವರು ಹಲವು ಪ್ರದೇಶಗಳಲ್ಲಿ ಜರಗಿದ ಪಂದ್ಯಾಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿರುತ್ತಾರೆ. ಆರು ಬಾರಿ ಬೆಂಗಳೂರು ಜೊನಲ್ ಲೆವೆಲ್‌ನ ಪಂದ್ಯಾಟದಲ್ಲಿ ಭಾಗವಹಿಸಿರುತ್ತಾರೆ. ಮೂನ್‌ಸ್ಟಾರ್ ಕ್ಲಬ್ ವತಿಯಿಂದ ನಡೆಸಲ್ಪಡುವ ಪಂದ್ಯಾಟಗಳಲ್ಲಿ ಭಾಗವಹಿಸುವ ಇವರು 15 ಸಂಚುರಿ, 125 ಬಾರಿ  50 ರನ್‌ಗಳನ್ನು ಪಡೆದಿರುತ್ತಾರೆ.

ಕು. ಅಂಜಲಿ ವಿಲ್ಸನ್ ವಾಜ್ - ಶಿರಸಿ

ಭರತನಾಟ್ಯಂ, ಕೂಚಿಪುಡಿ, ಕಥಕ್ ಮತ್ತು ಒಡಿಸ್ಸಿ  ಈ ನಾಲ್ಕು ನೃತ್ಯ ಪ್ರಕಾರಗಳಲ್ಲಿ ಪರಿಣತಿ ಹೊಂದಿರುವ ಬಹು ಅಪರೂಪದ ಪ್ರತಿಭೆಯೇ ಕು ಅಂಜಲಿ ವಿಲ್ಸನ್ ವಾಜ್, ವಿದ್ವತ್ ವಿದುಷಿ ಶ್ರೀಮತಿ ಸೀಮಾ ಭಗವತ್, ನಂದಿನಿ ಮೆಹೆತಾ, ಮೋಹನ ಮುರುಳಿ ಹಾಗೂ ಶ್ರೀಮತಿ ಶರ್ಮಿಳಾ ಇವರೆಲ್ಲರಿಂದಲೂ ತರಬೇತಿ ಪಡೆದಿರುತ್ತಾರೆ.  2007 ರಲ್ಲಿ ಬೆಳಗಾಂ, ಕೆ.ಎಲ್.ಇ ಮೆಡಿಕಲ್ ಕಾಲೇಜು ಏರ್ಪಡಿಸಿದ ಭರತನಾಟ್ಯಂ ಕಾರ್ಯಕ್ರಮದಲ್ಲಿ, ಕದಂಬೋತ್ಸವ, ಕರಾವಳಿ ಉತ್ಸವ,  ರಾಜ್ಯ ಮಟ್ಟದ ಹೆಜ್ಜೆಗೆಜ್ಜೆ ಕಾರ್ಯಕ್ರಮ ಹೀಗೆ 50 ಕ್ಕೂ ಹೆಚ್ಚಿನ ನೃತ್ಯ ಕಾರ್ಯಕ್ರಮ ನೀಡಿರುತ್ತಾರೆ. ಒಂದು ಗಂಟೆಯ ಮಹಾಭಾರತದ ಕಥೆಯನ್ನು ಕಥಕ್ ನೃತ್ಯದಲ್ಲಿ ಪ್ರದರ್ಶನ ನೀಡಿರುತ್ತಾರೆ. ವಿದ್ವತ್ ಪರೀಕ್ಷೆಯಲ್ಲಿ ದ್ವಿತೀಯ  ರ್‍ಯಾಂಕ್ ಗಳಿಸಿರುವ ಇವರು ಹಲವು ಸಂಘ ಸಂಸ್ಥೆಗಳಿಂದ ಸನ್ಮಾನ ಗೌರವಗಳನ್ನು ಪಡೆದಿರುತ್ತಾರೆ.  ನೃತ್ಯದ ಅಭಿರುಚಿ ಇರುವ ಮಕ್ಕಳಿಗೆ ನೃತ್ಯ ಕಲಿಸುವ ಗುರುಗಳಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.

ಸಾಧಕರಿಗೆ ಸನ್ಮಾನ:

ಕೊಂಕಣಿ ಅಕಾಡೆಮಿಯು ಸ್ಥಳೀಯವಾಗಿ, ಕೊಂಕಣಿ ಮಾತೃಭಾಷಿಕರಾಗಿ ಹುಟ್ಟಿ ಬೆಳೆದು ತಮ್ಮ ಕೆಲಸ ಕಾರ್ಯಗಳ ಮುಖಾಂತರ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದ ಮೂವರು ಸಾಧಕರನ್ನು ಈ ಬಾರಿ ಸನ್ಮಾನಿಸಲಿದೆ. ಅವರ ಕಿರು ಪರಿಚಯ ಇಂತಿದೆ.

ಸಿಎ ಎಸ್. ಎಮ್. ಸೈಯದ್ ಖಲೀಲ್, ಭಟ್ಕಳ

ಪ್ರತಿಷ್ಟ್ರಿತ ಲೊಯೆಲಾ ಕಾಲೇಜಿನಲ್ಲಿ ಬಿ.ಕಾಮ್ ಪದವಿ ಪಡೆದು 1965ರಲ್ಲೇ ಚಾರ್ಟೆಡ್ ಆಕೌಂಟೆಂಟ್(ಸಿ.ಎ.) ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದ ಸಾಧನೆ ಪಡೆದಿದ್ದಾರೆ. ಆಗಿನಿಂದ ಈಗಿನವರೆಗೆ ಕಳೆದ ಐದು ದಶಕಗಳಿಗಿಂತಲೂ ದೀರ್ಘ ಅವಧಿಯಲ್ಲಿ ಫರ್ಗೂಸನ್, ಮಹೀಂದ್ರ, ಫಾರಮೆ ಸಿಂಗಾಪುರ, ಗಲದಾರಿ ಗ್ರೂಪ್ ಮುಂತಾದ ಪ್ರಸಿದ್ದ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಸಾಮಾಜಿಕ ಕ್ಷೇತ್ರದಲ್ಲಿ, ಅಂಜುಮಾನ ಶಿಕ್ಷಣ ಸಂಸ್ಥೆ, ಭಟ್ಕಳ  ಖಲೀಜಾ ಕೌನ್ಸಿಲ್, ರಚಿರಾ ಸೊಸೈಟಿ, ಮಲಬಾರ್ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ದುಬೈ ಕರ್ನಾಟಕ ಸಂಘ, ದುಬೈ ಚಾರ್ಟಡ್ ಅಕೌಂಟೆಂಟ್ ಸಂಘ ಮುಂತಾದ ಹತ್ತು ಹಲವು ಸಂಘ ಸಂಸ್ಥೆಯ ಮೂಲಕ ಜನಸೇವೆ ಮಾಡುತ್ತಿದ್ದಾರೆ. ಭಟ್ಕಳದ ಅನೇಕ ಸಮಾಜ ಸೇವಾ ಸಂಸ್ಥೆಗಳಿಗೆ  ಅಪಾರ ಧನಸಹಾಯದೊಂದಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಗಲ್ಫ್‌ರಾಷ್ಟ್ರದ NRI ಆಗಿ ಕರ್ನಾಟಕ ರಾಜ್ಯ ಸರ್ಕಾರದ ನಡುವಿನ ವಾಣಿಜ್ಯ ಸೌಹಾರ್ದತೆಗೂ ಇವರ ಕೊಡುಗೆ ಇದೆ.

ಶ್ರೀ ಪ್ರದೀಪ್ ಜಿ ಪೈ, ಭಟ್ಕಳ

ಭಟ್ಕಳ ಮಣ್ಣಿನ ಮಗನಾಗಿರುವ ಶ್ರೀ ಪ್ರದೀಪ್ ಜಿ. ಪೈ ಇವರು ಇಂದು ಅಂತರಾಷ್ಟ್ರೀಯ ಮಟ್ಟದ ಉದ್ಯಮಿಯಾಗಿ ರೂಪುಗೊಂಡಿರುತ್ತಾರೆ. ಇಂಜಿನಿಯರಿಂಗ್ ಪದವಿದರಾಗಿರುವ ಇವರು ವಿಶ್ವಕೊಂಕಣಿ ಕೇಂದ್ರದ ಸ್ಕಾಲರ್ ಶಿಫ್ ಯೋಜನೆಯ ಮುಖ್ಯಸ್ಥರಲ್ಲಿ ಓರ್ವರಾಗಿದ್ದು, ಉನ್ನತ ಶಿಕ್ಷಣ ಪಡೆಯಲು ಇಚ್ಛಿಸುವ ಕೊಂಕಣಿ ಯುವ ಜನರಿಗೆ ಪ್ರೊತ್ಸಾಹ ನೀಡುತ್ತಿದ್ದಾರೆ.  ಇವರು ಅರಂಭಿಸಿದ ಹಾಂಗ್ಯೋ ಐಸ್ ಕ್ರೀಮ್ ಜನಪ್ರಸ್ತಿದ್ಧಿ ಪಡೆದಿದೆ.  

ಶ್ರೀ ಜೋರ್ಜ್ ಫೆರ್ನಾಂಡಿಸ್, ಕಾರವಾರ

ಮೂಲತಃ ಉತ್ತರಕನ್ನಡ ಜಿಲ್ಲೆಯವರಾದ ಇವರು ಸುಮಾರು 40 ವರ್ಷಗಳ ಕಾಲ ಸಹಕಾರಿ ರಂಗದ ವಿವಿಧ ಕ್ಷೇತ್ರಗಳಲ್ಲಿ  ಸುಧೀರ್ಘ ಸೇವೆ ಸಲ್ಲಿಸಿ ಅಪಾರ ಅನುಭವವನ್ನು ಪಡೆದಿರುತ್ತಾರೆ.
ಸಹಕಾರಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಇವರು 2003 ರಲ್ಲಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಅಪರೇಟಿವ್ ಲಿ. ಕಾರವಾರ ಎಂಬ ಸಂಸ್ಥೆಯ ಸಂಸ್ಥಾಪನೆಗೆ ಕಾರಣರಾದ ಇವರು ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೋಟರಿ ಡಿಸ್ಟ್ರಿಕ್ಟ್ ಇದರ ಜಿಲ್ಲಾ ಕಾರ್ಯದರ್ಶಿ, ಅಧ್ಯಕ್ಷರು ರೋಟರಿ ಕ್ಲಬ್ ಕಾರವಾರ ಅಖಿಲ ಭಾರತ ಕಥೊಲಿಕ್ ಸಂಘ ಇದರ ಅಂತರಿಕ ಲೆಕ್ಕಪರಿಶೋಧಕರು, ರಾಜ್ಯ ಕಾರ್ಯದರ್ಶಿ, ಕಥೋಲಿಕ್ ಅಸೋಸಿಯೇಷನ್ ಡಯೋಸಿಸ್ ಆಫ್  ಕಾರವಾರ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. 


Tags:  Karnataka Konkani Sahitya Academy, Konkani, Mangalore, Mangalorean, Mother Tongue

0 Comment/s.

Post your comments

Your email address will not be published. Required fields are marked *

Konkani English
Name  : 
Email  : 
Place  : 
Mobile  : 
I Am Human  : 
   Message :

Within a short span of time, www.maibhaas.com made a niche in the hearts of Konkani readers with its clean reading, attracting design in Konkani media. www.maibhaas.com, a dream child of Naveen Sequeira Brahmavar, has able to create its impact and wonders from the day of its inception in Konkani world. As each day passing www.maibhaas.com is growing as a strong pillar of Konkani media.

Our Address
Mangalore

Contact Person :
Mr. Praveen Tauro

 Email : praveen@maibhaas.com

 Phone : +91 99 80 184340

 Address :
          Daijiworld.com,
          Airport Road,
          opp. Bondel Church,
          Mangalore - 575 008
          Karnataka - India

Our Address
Udupi

Contact Person :
Mr. Joel D'almeida

 Email : joel@maibhaas.com

 Phone : +91 90 08 855392

 Address :
          Eventz Redefined,
          Next to Vijaya Bank,
          Holy Family Complex
          1st Floor, NH -66
          Brahmavara - 576213

Our Address
Dubai

Contact Person :
Mr. Naveen Sequeira

 Email : editor@maibhaas.com

 Phone : +97 150 755 4105

 Address :
          Master Mind IT Solutions,
          UBL Building,
          #402, 4th Floor
          Bank Street - Bur Dubai
          Dubai - UAE